ರವೀಂದರ್ ಚಂದ್ರಶೇಖರ್ ಸುಳ್ಳುಕೋರ.. ಆತನನ್ನು ನಂಬಿ ಮೋಸ ಹೋದೆ” ಎಂದ್ರಾ ಮಹಾಲಕ್ಷ್ಮೀ? – The Focus Hindi

ರವೀಂದರ್ ಚಂದ್ರಶೇಖರ್ ಸುಳ್ಳುಕೋರ.. ಆತನನ್ನು ನಂಬಿ ಮೋಸ ಹೋದೆ” ಎಂದ್ರಾ ಮಹಾಲಕ್ಷ್ಮೀ?

ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಪ್ರೇಮ ವಿವಾಹ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಗೊತ್ತೇ ಇದೆ. ಮದುವೆ ಕಾರಣ ದಂಪತಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್‌ಗಳನ್ನು ಎದುರಿಸಿದರು. ಆ ನಂತರ ರವೀಂದರ್-ಮಹಾಲಕ್ಷ್ಮಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡಿದ್ದರು.

ನಾವು ಶಾಶ್ವತವಾಗಿ ಒಟ್ಟಿಗೆ ಇರುತ್ತೇವೆ ಎಂದು ಇಬ್ಬರೂ ಹೇಳಿದ್ದರು.
ಆದರೆ, ರವೀಂದರ್ ಒಂದು ತಿಂಗಳ ಹಿಂದೆ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಸದ್ಯ ಅವರು ಜೈಲಿನಲ್ಲಿದ್ದಾರೆ. ಇಂತಹ ಸಮಯದಲ್ಲಿ ಮಹಾಲಕ್ಷ್ಮಿ ತಮ್ಮ ಪತಿ ರವೀಂದರ್ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ರವೀಂದರ್ ತನಗೆ ಮೋಸ ಮಾಡಿ ಮದುವೆಯಾಗಿದ್ದಾನೆ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗ್ತಿದೆ. ರವೀಂದರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಏನೂ ಹೇಳಿಲ್ಲ, ಮದುವೆಗೂ ಮುನ್ನ ಈ ವಿಷಯಗಳು ತಮಗೆ ತಿಳಿದಿರಲಿಲ್ಲ ಎಂದು ಅಲವತ್ತುಕೊಂಡಿದ್ದಾರಂತೆ.

Did actress Mahalakshmi Claim That Her Husband Ravindar Chandrasekaran Cheated on Her?

 

ಇದೀಗ ಮಹಾಲಕ್ಷ್ಮಿ ಕಾಮೆಂಟ್ಸ್ ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಮಹಾಲಕ್ಷ್ಮಿ ಭವಿಷ್ಯದ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಮದುವೆಯಾಗಿ ಎರಡು ವರ್ಷವೂ ಆಗದೇ ಈ ಜೋಡಿಯ ಜೀವನ ಈ ರೀತಿ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಮಹಾಲಕ್ಷ್ಮಿಯನ್ನು ಬೆಂಬಲಿಸಿದರೆ, ಮತ್ತೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಗಂಡ ಜೈಲಿಗೆ ಹೋದರೆ ಹೋಗಿ ಸಹಾಯ ಮಾಡಬೇಕು. ಆದರೆ ಅದು ಬಿಟ್ಟು ಆಕೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

ಪತಿ ದೂರವಾಗಿದ್ದಾರೆ ಎಂಬ ನೋವು ಆಕೆಗೆ ಕಾಡುತ್ತಿಲ್ಲ. ಹಣಕ್ಕಾಗಿ ಆಕೆ ರವೀಂದರ್‌ನ ಕೈ ಹಿಡಿದಿದ್ದಳು. ಆದರೆ ಪತಿ ಜೈಲಿಗೆ ಹೋದ ಬಳಿಕ ಮಹಾಲಕ್ಷ್ಮೀ ಕೊಂಚ ಒತ್ತಡ ಎದುರಿಸುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂದಹಾಗೆ ಇಬ್ಬರಿಗೂ ಇದು 2ನೇ ಮದುವೆ. ಮಹಾಲಕ್ಷ್ಮಿಗೆ ಇದಕ್ಕೂ ಮುನ್ನ ಮದುವೆಯಾಗಿ ಒಬ್ಬ ಮಗ ಕೂಡ ಇದ್ಧಾನೆ. 2019ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ಕಳೆದ ವರ್ಷ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಜೊತೆ ಮದುವೆ ಆಗಿತ್ತು.

ಬಾಲಾಜಿ ಎಂಬ ಉದ್ಯಮಿಗೆ ರವೀಂದ್ರ ಚಂದ್ರಶೇಖರ್ ವಂಚನೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ರವೀಂದ್ರ ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಕಾಪಾರನ್ನು ಪುಸಲಾಯಿಸಿದ್ದರು. ಈ ಸಂಬಂಧ ಸೆಪ್ಟೆಂಬರ್ 2020ಯಲ್ಲಿ ಸುಮಾರು 15.38 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಹಣ ಪಡೆದ ಬಳಿಕ ಯೋಜನೆಯನ್ನು ಆರಂಭಿಸಿಲ್ಲ ಹಾಗೂ ಹಣವನ್ನೂ ಹಿಂತಿರುಗಿಸಿಲ್ಲ ಎಂದು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು.

 

ತನಿಖೆ ವೇಳೆ ರವೀಂದ್ರ ಚಂದ್ರಶೇಖರ್ ದಾಖಲೆಗಳನ್ನು ನಕಲು ಮಾಡಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ರವೀಂದ್ರರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿತ್ತು. ಸದ್ಯ ನ್ಯಾಯಾಧೀಶರ ಆದೇಶದ ಹಿನ್ನೆಲೆ ರವೀಂದರ್‌ ಜೈಲಿನಲ್ಲಿದ್ದಾರೆ. ಇವರ ವಿರುದ್ಧ ಈಗಾಗಲೇ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ.

ನಿರ್ಮಾಪಕ ರವೀಂದರ್ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮಿ ಪ್ರೀತಿಸಿ ಮದುವೆ ಆಗಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಜೋಡಿ ಹೊಸ ಬಾಳಿಗೆ ಕಾಲಿಟ್ಟಿತ್ತು. ಇನ್ನು ಮಹಾಲಕ್ಷ್ಮಿ ಹಾಗೂ ರವೀಂದರ್​ನಡುವೆ 6 ವರ್ಷಗಳ ವಯಸ್ಸಿನ ಅಂತರ ಇದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಹಾಲಕ್ಷ್ಮಿ ಪತಿ ಜೊತೆಗಿನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ರವೀಂದರ್ ಬಾಡಿ ಶೇಮಿಂಗ್ ಎದುರಿಸುವಂತಾಗಿತ್ತು.

ಬಹಳ ದಪ್ಪ ಇರುವ ರವೀಂದರ್‌ನ ಮಹಾಲಕ್ಷ್ಮಿ ಯಾಕೆ ಮದುವೆ ಆದ್ರು? ಹಣ ಇದ್ದರೆ ಬೇರೆ ಏನು ನೋಡುವುದಿಲ್ಲ, ಬಹಳ ದಿನ ಇಬ್ಬರು ಒಟ್ಟಿಗೆ ಇರಲ್ಲ ಅಂತೆಲ್ಲಾ ಮಹಾಲಕ್ಷ್ಮೀನ ಕೂಡ ಟ್ರೋಲ್ ಮಾಡಿದ್ದರು.

Leave a Comment