ಬಿಗ್​ಬಾಸ್ ಶೋ ಆರಂಭವಾಗುವ ಮೊದಲೇ ಹೊಸ ಮನೆ ಗೃಹ ಪ್ರವೇಶ ಮಾಡಿದ ನಮೃತಾ ಗೌಡ. ಫೊಟೋಸ್ ಇಲ್ಲಿವೆ ನೋಡಿ – The Focus Hindi

ಬಿಗ್​ಬಾಸ್ ಶೋ ಆರಂಭವಾಗುವ ಮೊದಲೇ ಹೊಸ ಮನೆ ಗೃಹ ಪ್ರವೇಶ ಮಾಡಿದ ನಮೃತಾ ಗೌಡ. ಫೊಟೋಸ್ ಇಲ್ಲಿವೆ ನೋಡಿ

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಹೌದು ಕಿರುತೆರೆಯ ಉದಯೋನ್ಮುಖ ನಟಿ ನಮ್ರತಾ ಗೌಡ ಕಿರುತೆರೆಯಲ್ಲಿ ಅಭಿನಯಿಸುತ್ತಾ ಅನೇಕ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡ್ರು.

 

 

 

ತಮ್ಮ ಉತ್ತಮ ನಟನೆಯಿಂದ ಮನೆ ಮಾತಾಗಿದ್ದಾರೆ ನಟಿ ನಮ್ರತಾ. ಇನ್ನು ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಪಾತ್ರದ ಮೂಲಕ ನಮ್ರತಾ ಎಲ್ಲರ ಗಮನ ಸೆಳೆದಿದ್ದರು. ಹೌದು ನಾಗಣಿ 2 ಜನಪ್ರಿಯ ಸೀರಿಯಲ್ ಆಗಿದ್ದು ಮಾತ್ರವಲ್ಲದೆ ನಟಿ ನಮ್ರತಾಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇನ್ನು ಮೊಟ್ಟ ಮೊದಲಿಗೆ, 2011 ರಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ನಮ್ರತಾ ಗೌಡ ನಂತರ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.

 

 

ಈ ಧಾರವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಸಖತ್ ಫೇಮಸ್ ಆದ್ರು. ನಂತರ ರಿಯಾಲಿಟಿ ಶೋ ಕಡೆ ಮುಖ ಮಾಡಿ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ಜಿ ಕನ್ನಡ ವಾಹಿನಿಯಲ್ಲಿ ಆರಂಭವಾದ ನಾಗಿಣಿ 2 ಧಾರಾವಾಹಿಯಲ್ಲಿ ಅಭಿನಯಿಸುತ್ತಾ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡ್ರು. ಹೌದು ನಾಗಿಣಿ 2, ಪುಟ್ಟಗೌರಿ ಮದುವೆ, ಧಾರಾವಾಹಿ ನಟಿ ನಮ್ರತಾ ಗೌಡ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ನಮ್ರತಾ ಅವ್ರ ನೂತನ ಮನೆಯ ಗೃಹ ಪ್ರವೇಶ ಬಹಳ ಅದ್ದೂರಿಯಾಗಿ ನಡೆದಿದೆ.

 

 

ಇದೀಗ ಬಿಗ್ ಬಾಸ್ ಸೀಸನ್ 10ರಲ್ಲಿ ನಟಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಧಾರಾವಾಹಿಯಲ್ಲಿ ಮಿಂಚುವ ನಟಿಯೇ ಬಿಗ್ ಬಾಸ್ ಮನೆಯಲ್ಲೂ ಮಿಂಚಲಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ನಮೃತಾ ಅವರನ್ನು ಬಿಗ್ ಬಾಸ್ ಕರೆದಿದ್ದರು. ಹೀಗಾಗಿ ಈ ಬಾರಿ ರಿಯಾಲಿಟಿ ಶೋನಲ್ಲಿ ಖಂಡಿತ ಭಾಗವಹಿಸಲಿದ್ದಾರೆ. ಹಾಗಾಗಿಯೇ ಕಾರ್ಯಕ್ರಮ ಆರಂಭವಾಗುವ ಮುನ್ನವೇ ಮನೆ ಪ್ರವೇಶಿಸಿ ಮುಗಿಸಿದ್ದಾರೆ ಎನ್ನಲಾಗಿದೆ.

 

 

ದೇವರಿಗೆ ಅದ್ಧೂರಿಯಾಗಿ ಅಲಂಕಾರ ಮಾಡಿ ಬಂಧುಗಳ ಸಮ್ಮುಖದಲ್ಲಿ ನಮೃತಾ ಅವರ ಗೃಹ ಪ್ರವೇಶ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮವು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ನಡುವೆ ಅದ್ಧೂರಿಯಾಗಿ ನಡೆಯಿತು.

 


ಇನ್ನು ಅನೇಕ ಕಿರುತೆರೆ ತಾರೆಯರು ಈ ಸಮಾರಂಭಕ್ಕೆ ಹಾಜರಿ ಹಾಕಿ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ನಮ್ರತಾಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ನಮ್ರತಾ ಅವ್ರ ನೂತನ ಗೃಹ ಪ್ರವೇಶಕ್ಕೆ ನಟಿ ನೇಹಾ ಗೌಡ, ಅನುಪಮಾ ಗೌಡ, ಕವಿತಾ ಗೌಡ, ಕಿಶನ್ ಬಿಳಗಲಿ, ಯಶಸ್ವಿನಿ ಕೆ ಸ್ವಾಮಿ ಸೇರಿದಂತೆ ಇನ್ನು ಸಾಕಷ್ಟು ಕಿರುತಾರೆ ಕಲಾವಿದರು ಸೇರಿದಂತೆ ಮುಂತಾದವರು ಆಗಮಿಸಿ, ನಮ್ರತಾ ಜೊತೆಗೆ ನಿಂತು ಫೋಟೋ ಕ್ಲಿಕಿಸಿಕೊಂಡಿದ್ದು, ನಮ್ರತಾಗೆ ವಿಶ್ ಮಾಡಿ, ಶುಭಾಶಯಗಳನ್ನ ತಿಳಿಸಿದ್ದಾರೆ.

Leave a Comment